ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ರೈತರ RTC (ರೆಕಾರ್ಡ್ ಆಫ್ ರೈಟ್ಸ್, ಟೆನೆನ್ಸಿ ಮತ್ತು ಕ್ರಾಪ್ಸ್) ದಾಖಲೆಗಳಿಗೆ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಲಿಂಕ್ ಮಾಡುವ ಕ್ರಮ ಜರುಗಿಸಿದೆ. ಕಂದಾಯ ಇಲಾಖೆಯು 31/07/24 ರೊಳಗೆ ಪಹಣಿಗೆ ಆಧಾರ್ ಲಿಂಕ್ ಮಾಡಲು ಶಿಫಾರಸು ಮಾಡಿದೆ.
ಜಮೀನು ಹೊಂದಿರುವ ಸಾರ್ವಜನಿಕರು ಕಂದಾಯ ಇಲಾಖೆಯಿ ಈ ಅಧಿಕೃತ ವೆಬ್ಸೈಟ್ ಅನ್ನು ತಮ್ಮ ಮೊಬೈಲ್ ಬಳಕೆ ಮಾಡಿಕೊಂಡು ಭೇಟಿ ಮಾಡಿ ಮನೆಯಲ್ಲೇ ಕುಳಿತುಕೊಂಡು ನಿಮ್ಮ ಜಮೀನಿನ ಪಹಣಿಗೆ(RTC/ಊತಾರ್) ಆಧಾರ್ ಕಾರ್ಡ ಅನ್ನು ಲಿಂಕ್ ಮಾಡಬಹುದು.
ಈ ಪಹಣಿ ಮತ್ತು ಆಧಾರ್ ಕಾರ್ಡನ್ನು ಏಕೆ ಲಿಂಕ್ ಮಾಡಬೇಕು? ಆಧಾರ್ ಕಾರ್ಡ್ ಲಿಂಕ್ ಮಾಡಲು ಯಾವ ದಾಖಲಾತಿಗಳು ಬೇಕಾಗುತ್ತದೆ? ಮೊಬೈಲ್‌ನಲ್ಲಿ ಆಧಾರ್ ಕಾರ್ಡ್ ಮತ್ತು ಪಹಣಿ ಲಿಂಕ್ ಮಾಡುವುದು ಹೇಗೆ? ಮತ್ತು ಇನ್ನಿತರ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಓದುತ್ತಿರಿ.
Table of Contents
ಸರ್ಕಾರ ರೈತರಿಗಾಗಿ ಜಾರಿಗೆ ತಂದಿರುವ ಯೋಜನೆಗಳಾದ PM ಕಿಸಾನ್, ಬರ ಪರಿಹಾರ, ಬೆಳೆ ಹಾನಿ ಪರಿಹಾರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಮಾಡುವುದರಿಂದ ಅನುಕೂಲವಾಗಲಿದೆ. ರೈತರಿಗೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸುಲಭವಾಗಿಸುವುದು ಮತ್ತು ಭ್ರಷ್ಟಾಚಾರವನ್ನು ತಡೆಯುವುದು ಮುಂತಾದ ಹಲವು ಪ್ರಯೋಜನಗಳು ಇದರಿಂದ ಆಗುತ್ತವೆ. ಆದ್ದರಿಂದ RTC Aadhar Link ಮಾಡಿಕೊಳ್ಳಿ.
ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಯೋಜನಗಳು:
- 1. ನಿಮ್ಮ ಭೂಮಿಯ ದಾಖಲೆಗಳನ್ನು (ಊದಾ:ಪಹಣಿ, ಆಕರ ಬಂದ,ಪೋಡಿ,ಹಿಡುವಳಿ..) ಸುಲಭವಾಗಿ ಪಡೆಯಬಹುದು.
- 2. ಸರ್ಕಾರದ ಯೋಜನೆಗೆ ರೈತರು ಸುಲಭವಾಗಿ ಅರ್ಜಿ ಹಾಕಬಹುದು.
- 3. ರೈತರ ಭೂಮಿಯಲ್ಲಿ ಯಾವುದೇ ವಿವಾದಗಳು ಬರುವುದಿಲ್ಲ.
- 4. ರೈತರು ತಮ್ಮ ಹೊಲದ ಮೇಲೆ ಸುಲಭವಾಗಿ ಯಾವುದೇ ಲೋನ್ ಮತ್ತು ಸಾಲವನ್ನು ಪಡೆಯಬಹುದು.
- 5. ರೈತರು ಭೂಮಿ ಮರುವಾಗ ಮತ್ತು ಕೊಳ್ಳುವಾಗ ಪಾರದರ್ಶಕತೆ ಹೆಚ್ಚುತ್ತದೆ.
- 6. ಒಬ್ಬ ವ್ಯಕ್ತಿಯ ಎಲ್ಲಾ ಜಮೀನಿನ ವಿವರ ಸುಲಭವಾಗಿ ತಿಳಿಯಬಹುದು.
- 7.ರೈತರಿಗೆ ಸಬ್ಸಿಡಿ ಮತ್ತು ಯೋಜನೆಗಳ ಪ್ರಯೋಜನಗಳನ್ನು ಖಚಿತಪಡಿಸಿಕೊಳ್ಳುವುದು
- 8.ಭೂ ದಾಖಲೆಗಳ ನಕಲಿ ಪ್ರಕರಣಗಳನ್ನು ತಡೆಗಟ್ಟುವುದು
ಬೂಮಿ ಪಹಣಿ ಆಧಾರ್ ಕಾರ್ಡ್ ಲಿಂಕ್ ಅಗತ್ಯವಿರುವ ದಾಖಲೆಗಳು
- RTC ಪ್ರತಿ
- ಆಧಾರ್ ಕಾರ್ಡ್
- ಗುರುತಿನ ಚೀಟಿ (PAN ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ ಇತ್ಯಾದಿ)
ಆನ್ಲೈನ್ ಮೂಲಕ RTC Aadhar Link ಮಾಡುವ ಸುಲಭ ವಿಧಾನ
Step-1: ಪ್ರಥಮದಲ್ಲಿ Bhoomi – Login (karnataka.gov.in) ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಭೂಮಿ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.
Step-2: ನಿಮ್ಮ ಮೊಬೈಲ್ ನಂಬರ್ ಅನ್ನು ನಮೂದಿಸಿ. ಕೆಳಗಿನ ಕಾಲಂ ನಲ್ಲಿ ಕಾಣುವ ಕ್ಯಾಪ್ಚ್ ಕೋಡ್ ಅನ್ನು ಹಾಕಿ “SEND OTP” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3: “OTP has been sent to your mobile number/ನಿಮ್ಮ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗಿದೆ” ಪಾಪ್ ಅಪ್ ಕಾಣಿಸುತ್ತದೆ. ಇದಾದ ಬಳಿಕ ನೀವು ನಮೂದಿಸಿರುವ ಮೊಬೈಲ್ ಸಂಖ್ಯೆಗೆ ಬರುವ 6 ಅಂಕಿಯ OTP ಅನ್ನುOTP ಕಾಲಮ್ಅಲ್ಲಿ ಹಾಕಿ “Login” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-4: ತದನಂತರ ಇಲ್ಲಿ ಜಮೀನು ಯಾರ ಹೆಸರಿಗೆ ಇದಿಯೋ ಅವರ ಆಧಾರ್ ಸಂಖ್ಯೆಯನ್ನು ಮತ್ತು ಅಧಾರ್ ನಲ್ಲಿರುವಂತೆಯೇ ಹೆಸರನ್ನು ಹಾಕಿ ” I herein give my consent voluntarily for Aadhaar” ಕ್ಲಿಕ್ ಮಾಡಿ “Verify” ಬಟನ್ ಮೇಲೆ ಕ್ಲಿಕ್ ಮಾಡಿದರೆ “Aadhaar verified Succesfully” ಎಂದು ತೋರಿಸುತ್ತದೆ ನಂತರ “Ok” ಎಂದು ಕ್ಲಿಕ್ ಮಾಡಬೇಕು.
Step-5: ಮೇಲಿನ ವಿಧಾನ ಮುಗಿಸಿದ ಬಳಿಕ ಅಲ್ಲೇ ಕೆಳಗೆ ಕಾಣುವ “ಆಧಾರ್ ಪರಿಶೀಲನೆಯನ್ನು ಬಳಸಿಕೊಂಡು ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿ” ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಮತ್ತೊಮ್ಮೆ ಅರ್ಜಿದಾರರ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ OTP ಬಟನ್ ಮೇಲೆ ಟಿಕ್ ಮಾಡಿ ಒಟಿಪಿ ಪಡೆಯಿರಿ/Generate OTP ಬಟನ್ ಮೇಲೆ ಕ್ಲಿಕ್ ಮಾಡಿ .ಇಲ್ಲಿ ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. 6 ಅಂಕೆಗಳ OTP ನಮೂದಿಸಿ “ಸಲ್ಲಿಸು/Submit” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-6: ಚಿತ್ರದಲ್ಲಿ ನೀವು ನೋಡುವಂತೆ ನಿಮ್ಮ ಪ್ರೊಫೈಲ್ ಅನ್ನು ತೆರೆಯಲಾಗುತ್ತದೆ. ಎಲ್ಲಾ ವಿವರಗಳನ್ನು ಪ್ರದರ್ಶಿಸಲಾಗುತ್ತದೆ ಎಡಭಾಗದಲ್ಲಿ “ನೀವು ಲಿಂಕ್ ಆಧಾರ್/Link Aadhaar” ಆಯ್ಕೆಯನ್ನು ನೋಡಬಹುದು. ಲಿಂಕ್ ಆಧಾರ್ ಆಯ್ಕೆಯನ್ನು ಕ್ಲಿಕ್ ಮಾಡಿ.
Step 7: ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಸೇರಿದಂತೆ ನಿಮ್ಮ ವಿವರಗಳನ್ನು ಪ್ರದರ್ಶಿಸಲಾಗುತ್ತದೆ. ನಿಮ್ಮ ಜಿಲ್ಲೆಯ ಪಕ್ಕದಲ್ಲಿರುವ ಬಾಕ್ಸ್ ಅನ್ನು ಟಿಕ್ ಮಾಡಿ. ನಿಮ್ಮ ವಿವರಗಳನ್ನು ಪ್ರದರ್ಶಿಸದಿದ್ದರೆ ” If you want to fetch land details from bhoomi” ಕ್ಲಿಕ್ ಮಾಡಿ. ಈಗ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಸೇರಿದಂತೆ ಎಲ್ಲಾ ವಿವರಗಳನ್ನು ನಮೂದಿಸಿ ಮತ್ತು “Go” ಕ್ಲಿಕ್ ಮಾಡಿ.
Step-8: ನಿಮ್ಮ ಆಧಾರ್ ಕಾರ್ಡ್ ಮತ್ತು ಪಹಣಿಯಲ್ಲಿರುವ ಹೆಸರು ಒಂದೇ ಆಗಿರಬೇಕು. ಇಲ್ಲದಿದ್ದರೆ ನಿಮ್ಮ ಆಧಾರ್ ಪಹಣಿಗೆ ಲಿಂಕ್ ಆಗುವುದಿಲ್ಲ. ಹೆಸರು ಹೊಂದಾಣಿಕೆಯಾದರೆ ಅದು “Done” ಎಂದು ತೋರಿಸುತ್ತದೆ. “OK” ಕ್ಲಿಕ್ ಮಾಡಿ.
Step-9: ನೀವು “OK” ಕ್ಲಿಕ್ ಮಾಡಿದ ನಂತರ “Link” ಆಯ್ಕೆಯು ಬಲಭಾಗದಲ್ಲಿ ತೆರೆಯುತ್ತದೆ. “Link” ಮೇಲೆ ಕ್ಲಿಕ್ ಮಾಡಿ.
Step 10: ಈಗ ಮೇಲೆ ಕ್ಲಿಕ್ ಮಾಡಿ” I here by give consent for the use of my Aadhaar number on voluntary” ಮೇಲೆ ಕ್ಲಿಕ್ ಮಾಡಿ.
Step 11: ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಒಟಿಪಿ ಪಾಪ್ ಅಪ್ ಬರುತ್ತದೆ. ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಒಟಿಪಿ ಅನ್ನು ನಮೂದಿಸಿ ಮತ್ತು “Verify OTP” ಕ್ಲಿಕ್ ಮಾಡಿ.
Step 12: “ದಯವಿಟ್ಟು ಕಚಿತಪಡಿಸಿ/ Please Confirm” ಆಯ್ಕೆ ಬರುತ್ತದೆ. ಈಗ ಹೌದು ಕ್ಲಿಕ್ ಮಾಡಿ.
Step-13: ನಿಮ್ಮ ಪಹಣಿಗೆ ಯಶಸ್ವಿಯಾಗಿ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂಬ ಸಂದೇಶ ನಿಮಗೆ ತೋರಿಸಲಾಗುತ್ತದೆ.
ನಿಮ್ಮ ಆಧಾರ್ ಕಾರ್ಡ್ ಈಗಾಗಲೇ ಪಹಣಿಗೆ ಲಿಂಕ್ ಆಗಿದ್ದರೆ Step 4 “Link” ಬಟನ್ ಮೇಲೆ ಕ್ಲಿಕ್ ಮಾಡಿ OTP ಪಡೆದು “Verify” ಮೇಲೆ ಕ್ಲಿಕ್ ಮಾಡಿದಾಗ “ಈ ಸರ್ವೆ ನಂಬರ್ ಈಗಾಗಲೇ ಲಿಂಕ್ ಆಗಿದೆ/Survey No. already linked” ಎನ್ನುವ ಸಂದೇಶ ತೋರಿಸಿದರೆ ನಿಮ್ಮ ಪಹಣಿಗೆ ಆಧಾರ್ ಲಿಂಕ್ ಅಗಿದೆ ಎಂದು.
ಕೆಲವು ಸುಲಭ ಹಂತಗಳಲ್ಲಿ ನೀವು ಪಹಣಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಹೇಗೆ ಲಿಂಕ್ ಮಾಡುತ್ತೀರಿ. ಎಲ್ಲಾ ಸರ್ಕಾರಿ ಯೋಜನೆಗಳು, ಸಬ್ಸಿಡಿಗಳು, ಸಹಾಯ ದನವನ್ನು, ಟ್ರ್ಯಾಕ್ಟರ್, ಬೀಜಗಳು, ಪೈಪ್ ಪಡೆಯಾಲು ಮುಂತಾದ ಉಪಕರಣಗಳು ಪಡೆಯಲು ದಯವಿಟ್ಟು 31/07/24 ರ ಮೊದಲು ಪಹಣಿಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಿ.
ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ದಯವಿಟ್ಟು ನನಗೆ ಇಮೇಲ್ ಮಾಡಿ ಅಥವಾ ಕಾಮೆಂಟ್ಗಳ ವಿಭಾಗದಲ್ಲಿ ನಿಮ್ಮ ಪ್ರಶ್ನೆಗಳನ್ನು ಬರೆಯಿರಿ. ನನ್ನ ಬ್ಲಾಗ್ ಪೋಸ್ಟ್ ಓದಿದ್ದಕ್ಕಾಗಿ ಧನ್ಯವಾದಗಳು.
ಈ ಲೇಖನದ ನೀಡಿರುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಇತರೆ ರೈತ ಬಂಧುಗಳಿಗೆ ಈ ಲೇಖನವನ್ನು ವಾಟ್ಸಪ್ ನಲ್ಲಿ ಶೇರ್ ಮಾಡಿ.