ಬೆಳೆ ವಿಮೆ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಪ್ರಕಟಿಸಲಾಗಿದೆ. ರೈತರು ತಮ್ಮ ಬೆಳೆಗಳಿಗೆ ಕ್ರಾಪ್ ಇನ್ಸೂರೆನ್ಸ್ ಅನ್ನ ಮಾಡಿಸಿಕೊಳ್ಳಲಿಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ತಕ್ಷಣ ಸಲ್ಲಿಸಿ. ನೀವು ಕೂಡ ರೈತರಾಗಿದ್ದರೆ ಈ ವರ್ಷ ಅಂದ್ರೆ 2024 ನೇ ಸಾಲಿನಲ್ಲಿ ನೀವು ಬೆಳೆದಿರುವಂತಹ ನಿಮ್ಮ ಬೆಳೆಗಳಿಗೆ ಏನಾದರೂ ಮುಂದೆ ಸಮಸ್ಯೆ ಆದ್ರೆ ಸರ್ಕಾರದ ಕಡೆಯಿಂದ ಇನ್ಸೂರೆನ್ಸ್ ಅನ್ನ ಪಡೆದುಕೊಳ್ಳಲಿಕ್ಕೆ ಈಗ ಆನ್ಲೈನ್ ಮೂಲಕ ಅರ್ಜಿಯನ್ನ ಆಹ್ವಾನ ಮಾಡಲಾಗಿದೆ.
ನೀವು ಓದಲು ಬಯಸುವ ಭಾಗಕ್ಕೆ ನೇರವಾಗಿ ಹೋಗಲು ಕೆಳಗೆ ನೀಡಿರುವ ಲಿಂಕ್‌ಗಳನ್ನು ಕ್ಲಿಕ್ ಮಾಡಿ.
Table of Contents
ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/07/24. ಆದ್ದರಿಂದ ತಕ್ಷಣ ಅರ್ಜಿ ಸಲ್ಲಿಸಿ.
ನಿಮ್ಮ ಊರಿನಲ್ಲಿ ಯಾವ ಯಾವ ಬೆಳೆಗಳಿಗೆ ಕ್ರಾಪ್ ಇನ್ಸೂರೆನ್ಸ್ ಅನ್ನ ಕೊಡ್ತಾ ಇದ್ದಾರೆ ,ಆ ಬೆಳೆಗಳು ಯಾವ್ಯಾವು ಅಂತ ಚೆಕ್ ಮಾಡುವುದು ಹೇಗೆ, ಹಾಗೆ ನೀವು ಎಷ್ಟು ಎಕರೆಗೆ ಎಷ್ಟು ಹಣವನ್ನು ಕಟ್ಟಬೇಕು, ನೀವು ಕಟ್ಟಿರುವಂತಹ ಹಣಕ್ಕೆ ಎಷ್ಟು ಹಣ ವಾಪಸ್ ಬರುತ್ತೆ, ಇನ್ಸೂರೆನ್ಸ್ ಹಣ ಎಷ್ಟು ನಿಮಗೆ ಬರುತ್ತೆ ಹಾಗೆ ಅರ್ಜಿಯ ಪ್ರಸ್ತುತ ಸ್ಥಿತಿ ತಿಳಿಯಬಹುದು. ಹೇಗೆ ಎಂಬುದರ ಬಗ್ಗೆ ಕಂಪ್ಲೀಟ್ ಮಾಹಿತಿನ ಈ ಒಂದು ಬ್ಲಾಗ್ ನಲ್ಲಿ ವಿವರಿಸಲಾಗುವುದು.
ನಿಮ್ಮ ಬೆಳೆಗಳು ಬೆಳೆ ವಿಮೆಯ ವ್ಯಾಪ್ತಿಗೆ ಒಳಪಟ್ಟಿವೆಯೇ?
ಮೊದಲನೆಯದಾಗಿ ನಿಮ್ಮ ಪ್ರದೇಶದಲ್ಲಿ ಯಾವ ಬೆಳೆಗಳು ಬೆಳೆ ವಿಮಾ ಯೋಜನೆಯಡಿ ಒಳಪಡುತ್ತವೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಎಷ್ಟು ಎಕರೆಗೆ ನೀವು ಹಣವನ್ನು ಕಟ್ಟಬೇಕು, ನಿಮಗೆ ಎಷ್ಟು ಇನ್ಸೂರೆನ್ಸ್ ಹಣ ಬರುತ್ತೆ, ಅರ್ಜಿಯನ್ನು ಸಲ್ಲಿಸುವುದು ಹೇಗೆ ಅಂತ ನಾನು ನಿಮಗೆ ತಿಳಿಸ್ತೀನಿ.
Step 1: https://www.samrakshanereports.karnataka.gov.in/ ಅಂತ ಈ ಒಂದು ಆಫೀಶಿಯಲ್ ವೆಬ್ಸೈಟ್ನ ನೀವು ಸ್ವತಃ ಮೊಬೈಲ್ ಅಲ್ಲೇ ಓಪನ್ ಮಾಡಿಕೊಳ್ಳಿ .
Step 2: ರೈತರ ವಿಭಾಗದಲ್ಲಿ ನೀವು ವಿಮೆ ಮಾಡಬಹುದಾದ ಬೆಳೆಗಳನ್ನು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ.
Step 3: ನಂತರ ಇಲ್ಲಿ ನಿಮ್ಮ ಜಿಲ್ಲೆಗಳನ್ನ ಸೆಲೆಕ್ಟ್ ಮಾಡಿಕೊಳ್ಳಿ . ನಂತರ ನಿಮ್ಮ ತಾಲೂಕ್ ಯಾವುದು ಬರುತ್ತೆ ಆ ತಾಲೂಕನ್ನ ಸೆಲೆಕ್ಟ್ ಮಾಡ್ಕೊಳಿ ನಂತರ ನಿಮ್ಮ ಹೋಬಳಿ ಬರುತ್ತೆ ಹೋಬಳಿನ ಸೆಲೆಕ್ಟ್ ಮಾಡಿಕೊಳ್ಳಿ. ನಂತರ ನಿಮ್ಮ ಗ್ರಾಮ ಯಾವುದು ಬರುತ್ತೆ ಆ ಗ್ರಾಮವನ್ನ ಸೆಲೆಕ್ಟ್ ಮಾಡಿಕೊಳ್ಳಿ.
Step 4: ನಂತರ ಇಲ್ಲಿ ಪ್ರದರ್ಶಿಸಿ ಅಥವಾ ಪ್ರಿವ್ಯೂ ಅಥವಾ ಡಿಸ್ಪ್ಲೇ ಅಂತ ಒಂದು ಆಪ್ಷನ್ ಬರುತ್ತೆ. ಈ ಒಂದು ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿದಾಗ ಇಲ್ಲಿ ನಿಮ್ಮ ಊರಿನಲ್ಲಿ ಯಾವ ಬೆಳೆಗಳಿಗೆ ಅವರು ಕ್ರಾಪ್ ಇನ್ಸೂರೆನ್ಸ್ ನ ಕೊಡ್ತೀವಿ ಅಂತ ಹೇಳಿದ್ದಾರೆ ಅಂತ ಇಲ್ಲಿ ನೀವು ನೋಡಬಹುದಾಗಿದೆ.
ನಂತರ ಇಲ್ಲಿ ನಿಮಗೆ ವಿಮಾ ಮೊತ್ತ ಎಷ್ಟು ಬರುತ್ತೆ ಆ ಮಾಹಿತಿ ಕೂಡ ಇಲ್ಲಿ ಕೊಟ್ಟಿದ್ದಾರೆ. ಇದು ಪ್ರತಿ ಹೆಕ್ಟರ್ ಗೆ ಇರುತ್ತೆ . ಬೆಳೆಗಳ ಮೇಲೆ ಅವರು ಹೆಚ್ಚು ಕಡಿಮೆ ಮಾಡ್ತಾ ಇರ್ತಾರೆ. ಈ ರೀತಿಯಾಗಿ ನಿಮ್ಮ ಊರಿನಲ್ಲಿ ಯಾವ ಬೆಳೆಗಳಿಗೆ ನೀವು ವಿಮೆ ಮಾಡಬಹುದು ಅಂತ ನೋಡಬಹುದು.
ಪ್ರೀಮಿಯಂ ಲೆಕ್ಕಾಚಾರದ ಬಗ್ಗೆ ಮಾಹಿತಿ
ನಂತರ ಈಗ ಎಷ್ಟು ಎಕರೆಗೆ ನೀವು ಹಣವನ್ನು ಕಟ್ಟಬೇಕು ಅದು ಕೂಡ ಇಲ್ಲಿ ನೀವು ಪರಿಶೀಲಿಸಬಹುದು.
Step 1: ರೈತರ ವಿಭಾಗಕ್ಕೆ ಹಿಂತಿರುಗಿ ಮತ್ತು ಪ್ರೀಮಿಯಂ ಕ್ಯಾಲ್ಕುಲೇಟರ್ ಆಯ್ಕೆಯನ್ನು ಕ್ಲಿಕ್ ಮಾಡಿ.
Step 2: 2024 25 ಮತ್ತೆ ಋತು ಮುಂಗಾರು ಅಂತ ಆಯ್ಕೆ ಮಾಡಿ. ನಿಮ್ಮದು ಯಾವ ಜಿಲ್ಲೆ ಬರುತ್ತೆ ಆ ಜಿಲ್ಲೆಯನ್ನು ಸೆಲೆಕ್ಟ್ ಮಾಡ್ಕೊಳಿ. ನಂತರ ತಾಲೂಕನ್ನ ಸೆಲೆಕ್ಟ್ ಮಾಡ್ಕೊಳಿ. ನಂತರ ಹೋಬಳಿನ ಸೆಲೆಕ್ಟ್ ಮಾಡ್ಕೊಳಿ. ನಂತರ ಗ್ರಾಮ ಸೆಲೆಕ್ಟ್ ಮಾಡ್ಕೊಳಿ. ಯಾವ ಬೆಳೆಗಳಿಗೆ ನೀವು ಬೆಳೆ ವಿಮೆ ಅನ್ನ ಮಾಡಿಸ್ಕೊಬೇಕು ಅಂತ ಅನ್ಕೊಂಡಿದ್ದೀರಿ ಆ ಬೆಳೆನ ಸೆಲೆಕ್ಟ್ ಮಾಡ್ಕೊಳಿ. ಆನಂತರ ಇಲ್ಲಿ ಎಷ್ಟು ಎಕರೆಗೆ ನೀವು ಕ್ರಾಪ್ ಇನ್ಸೂರೆನ್ಸ್ ಅನ್ನ ಮಾಡ್ಕೋಬೇಕು ಅಂತ ಅನ್ಕೊಂಡಿದ್ದೀರಿ ಅಲ್ಲಿ ಎಕರೆದಲ್ಲಿ ಮೆನ್ಷನ್ ಮಾಡಿ . ಎಕರೆ ನಂತರ ಇಲ್ಲಿ ಗುಂಟಾ ಸೆಲೆಕ್ಟ್ ಮಾಡ್ಕೊಳಿ.
Step 3: ನಂತರ ಇಲ್ಲಿ ಪ್ರೀಮಿಯಂ ವ್ಯೂವರ್ ಅಂತ ಒಂದು ಆಪ್ಷನ್ ಇದೆ ನೋಡಿ ಈ ಒಂದು ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ಇಲ್ಲಿ ನೋಡ್ತಿರಬಹುದು ಕೆಳಗಡೆ ಎಷ್ಟು ಎಕರೆಗಳಿಗೆ ಎಷ್ಟು ಹಣವನ್ನು ಕಟ್ಟಬೇಕು ಅಂತ ಡಿಸ್ಪ್ಲೇ ಆಗಿದೆ. ಇಲ್ಲಿ ನೀವು ಎಷ್ಟು ಎಕರೆಯನ್ನ ಜಮೀನು ಸೆಲೆಕ್ಟ್ ಮಾಡ್ಕೊಂತೀರಾ ಅಷ್ಟು ಹಣವನ್ನ ಇಲ್ಲಿ ನೀವು ನೋಡಬಹುದು .ನೀವು ನೋಡುವಂತೆ 2 ಎಕರೆ ಜಮೀನಿನಲ್ಲಿ ಮಳೆಯಾಶ್ರಿತ ತೊಗರಿ ಬೆಳೆಗೆ ಪಾವತಿಸಬೇಕಾದ ಪ್ರೀಮಿಯಂ 2855 ರೂಪಾಯಿ.ಇದರಲ್ಲಿ ರೈತ ಪಾವತಿಸಬೇಕಿರುವುದು ಕೇವಲ 777 ರೂಪಾಯಿ.ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನೀಡಿದ ಮೊತ್ತವನ್ನು ರೈತರ ಪ್ರೀಮಿಯಂನೊಂದಿಗೆ ಪ್ರದರ್ಶಿಸಲಾಗುತ್ತದೆ. ಇದೇ ರೀತಿಯಾಗಿ ನೀವು ಕೂಡ ಯಾವ ಬೆಳೆಗೆ ಎಷ್ಟು ಜಮೀನಿನ ಏರಿಯಾಗೆ ಎಷ್ಟು ಹಣ ಕಟ್ಟಬೇಕು ಅಂತ ಅಲ್ಲಿ ನೀವು ನೋಡಬಹುದು. ಅದೇ ರೀತಿಯಾಗಿ ನಿಮಗೆ ಎಷ್ಟು ವಿಮೆ ಬರುತ್ತೆ ಅಂತ ಕೂಡ ಇಲ್ಲಿ ಡಿಸ್ಪ್ಲೇ ಮಾಡಿರುತ್ತಾರೆ. ಈ ರೀತಿಯಾಗಿ ವಿಮೆ ಹಣವನ್ನು ಕೂಡ ನೀವು ಚೆಕ್ ಮಾಡ್ಕೋಬಹುದಾಗಿದೆ.
ನಿಮ್ಮ ಪ್ರಸ್ತುತ ಬೆಳೆ ವಿಮೆ ಅಪ್ಲಿಕೇಶನ್ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು
ಈಗಾಗಲೇ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿರುವ ರೈತರು ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಬಹುದು.
Step 1: https://www.samrakshanereports.karnataka.gov.in/ ಅಂತ ಈ ಒಂದು ಆಫೀಶಿಯಲ್ ವೆಬ್ಸೈಟ್ನ ನೀವು ಸ್ವತಃ ಮೊಬೈಲ್ ಅಲ್ಲೇ ಓಪನ್ ಮಾಡಿಕೊಳ್ಳಿ .
Step 2: ರೈತರ ವಿಭಾಗದಲ್ಲಿ ಅರ್ಜಿ ಸ್ಥಿತಿಯ ಮೇಲೆ ಕ್ಲಿಕ್ ಮಾಡಿ.
Step 3: ನಂತರ ಈ ಪುಟದಲ್ಲಿ Proposal Id/mobile no/Aadhar 3 ಆಯ್ಕೆಯನ್ನು ತೋರಿಸುತ್ತದೆ ‘ನಿಮ್ಮ ಬಳಿ ಲಭ್ಯವಿರುವ ಮಾಹಿತಿಯ ಪ್ರಕಾರ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಂಡು ಉದಾ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡು ಅರ್ಜಿದಾರರ ಮೊಬೈಲ್ ಸಂಖ್ಯೆ ನಮೂದಿಸಿ ನಂತರ ಕ್ಯಾಪ್ಟ ಕೋಡ್ ಹಾಕಿ “Search” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-4: ಈ ರೀತಿ ವಿಧಾನವನ್ನು ಅನುಸರಿಸಿದ ನಂತರ ಈ ಪುಟದಲ್ಲಿ ಅರ್ಜಿದಾರರ ಬೆಳೆ ವಿಮೆ ಅರ್ಜಿಯ , “GramaOne Payment Successful by Approved by Bank and Forwarded to insurance Co, “ಎಂದು ತೋರಿಸಿದರೆ ಮಾತ್ರ ನಿಮ್ಮ ಬೆಳೆ ವಿಮಾ ಅರ್ಜಿ ಯಶ್ವವಿಯಾಗಿ ಸಲ್ಲಿಕೆ ಅಗಿದೆ ಎಂದು ಒಂದು ಮೇಲೆ ‘ಬೆಳೆ ನೋಂದಣಿಯು ಪುಗತಿಯಲ್ಲಿದೆ/Data Entry In Progress” ಎಂದು ಅಥವಾ “No date found” ಎಂದು ತೋರಿಸಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು.
. ಇದು ಆಫೀಶಿಯಲ್ ಆಗಿ ಕರ್ನಾಟಕ ಸರ್ಕಾರದ ಕಡೆಯಿಂದ ಬಂದಿರುವಂತಹ ಅಧಿಸೂಚನೆ . ನೀವು ಅರ್ಜಿಯನ್ನ ಸಲ್ಲಿಸುವುದು ಹೇಗೆ ಅಂತ ನೋಡೋದಾದ್ರೆ ಸ್ನೇಹಿತರೆ ಈ ಒಂದು ಅರ್ಜಿನ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳು ಅಥವಾ ಸಿ ಎಸ್ಸಿ ಸೆಂಟರ್ ಗಳು ಅಥವಾ ಗ್ರಾಮ ಒನ್ ಕರ್ನಾಟಕ ಒನ್ ಸೆಂಟರ್ ಗಳಿಗೆ ಹೋಗಿ ನೀವು ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ ಅಲ್ಲಿ ಪ್ರೀಮಿಯಂ ಅಮೌಂಟ್ ಕೂಡ ಅಲ್ಲೇ ಕಟ್ಟಬೇಕಾಗುತ್ತೆ ಎಷ್ಟು ಹಣ ಬರುತ್ತೆ ಅಂತ ಅಲ್ಲಿ ನಿಮಗೆ ಡಿಸ್ಪ್ಲೇ ಆಗುತ್ತೆ ಆ ಹಣವನ್ನು ಕಟ್ಟಿ ನೀವು ಕ್ರಾಪ್ ಇನ್ಸೂರೆನ್ಸ್ ಅನ್ನ ಮಾಡ್ಕೋಬಹುದಾಗಿದೆ.
ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ದಯವಿಟ್ಟು ನನಗೆ ಇಮೇಲ್ ಮಾಡಿ ಅಥವಾ ಕಾಮೆಂಟ್ಗಳ ವಿಭಾಗದಲ್ಲಿ ನಿಮ್ಮ ಪ್ರಶ್ನೆಗಳನ್ನು ಬರೆಯಿರಿ. ನನ್ನ ಬ್ಲಾಗ್ ಪೋಸ್ಟ್ ಓದಿದ್ದಕ್ಕಾಗಿ ಧನ್ಯವಾದಗಳು.
ಈ ಲೇಖನದ ನೀಡಿರುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಇತರೆ ರೈತ ಬಂಧುಗಳಿಗೆ ಈ ಲೇಖನವನ್ನು ವಾಟ್ಸಪ್ ನಲ್ಲಿ ಶೇರ್ ಮಾಡಿ.